Published on: June 14, 2025

ಕೋಲಾರದಲ್ಲಿ ತೇಲುವ ಸೌರವಿದ್ಯುತ್ ಘಟಕ

ಕೋಲಾರದಲ್ಲಿ ತೇಲುವ ಸೌರವಿದ್ಯುತ್ ಘಟಕ

ಸುದ್ದಿಯಲ್ಲಿ ಏಕಿದೆ? ಕೋಲಾರ ತಾಲ್ಲೂಕಿನ ಸುಗಟೂರು ಹೋಬಳಿಯ ಸೋಮಾಂಬುಧಿ ಅಗ್ರಹಾರ ಕೆರೆ ನೀರಿನ ಮೇಲೆ ಸೌರಫಲಕ ಅಳವಡಿಸಿ ವಿದ್ಯುತ್‌ ಉತ್ಪಾದಿಸಲು ಸಣ್ಣ ನೀರಾವರಿ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.

ಮುಖ್ಯಾಂಶಗಳು

  • ಇದು ರಾಜ್ಯದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿರುವ ಪ್ರಯೋಗವಾಗಿದೆ. ಈ ಯೋಜನೆಯು ಕೆರೆಯ ನೀರಿನ ಮೇಲೆ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.
  • ಕೆ.ಸಿ.ವ್ಯಾಲಿ ಯೋಜನೆ ಬಳಿಕ ಈ ಕೆರೆಯಲ್ಲಿ ವರ್ಷವಿಡೀ ನೀರು ತುಂಬಿಕೊಂಡಿರುವ ಕಾರಣ ಸೌರ ಘಟಕ ಅಳವಡಿಸಲು ಆಯ್ಕೆ ಮಾಡಲಾಗಿದೆ.

ಯೋಜನೆಯ ಉದ್ದೇಶ:

ಕೆರೆಯ ನೀರಿನ ಮೇಲೆ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸುವುದು ಮತ್ತು ವಿದ್ಯುತ್ ವೆಚ್ಚವನ್ನು ತಗ್ಗಿಸುವುದು.

ರಾಜ್ಯದ ಇತರ ಕೆರೆಗಳಿಗೂ ವಿಸ್ತರಣೆ:

ಕೋಲಾರದ ಯಶಸ್ಸಿನ ಆಧಾರದ ಮೇಲೆ ರಾಜ್ಯದ ಇತರ ಕೆರೆಗಳಲ್ಲೂ ಈ ಮಾದರಿಯನ್ನು ಅಳವಡಿಸಲು ಸರ್ಕಾರ ಯೋಜಿಸಿದೆ.

ಲಾಭಗಳು: ವಿದ್ಯುತ್ ಉತ್ಪಾದನೆಯ ವೆಚ್ಚ ಕಡಿಮೆಯಾಗುತ್ತದೆ ಮತ್ತು ನೀರಿನ ಆವಿಯಾಗುವಿಕೆ ತಡೆಯಬಹುದು. ಕೋಲಾರದ ಯಶಸ್ಸಿನ ಆಧಾರದ ಮೇರೆಗೆ ರಾಜ್ಯದ ವಿವಿಧೆಡೆ ಇಲಾಖೆ ವ್ಯಾಪ್ತಿಯಲ್ಲಿರುವ 100 ಎಕರೆಗೂ ಹೆಚ್ಚಿನ ವಿಸ್ತೀರ್ಣದ 40ಕ್ಕೂ ಹೆಚ್ಚು ಕೆರೆಗಳಲ್ಲಿ ತೇಲುವ ಸೌರ ಘಟಕ ಅಳವಡಿಸಲು ಸರ್ಕಾರ ಮುಂದಾಗಲಿದೆ.

ಗುರಿ: ಈ ಮೂಲಕ 2,500 ಮೆಗಾ ವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.

ದೇಶದಲ್ಲಿನ ತೇಲುವ ಸೌರ ಘಟಕ

  • ಎನ್‌ಟಿಪಿಸಿ ರಾಮಗುಂಡಂ ತೇಲುವ ಸೌರಶಕ್ತಿ ಸ್ಥಾವರವು ಭಾರತದ ತೆಲಂಗಾಣದಲ್ಲಿರುವ ಎನ್‌ಟಿಪಿಸಿ ರಾಮಗುಂಡಂ ಉಷ್ಣ ವಿದ್ಯುತ್ ಸ್ಥಾವರದ ಜಲಾಶಯದಲ್ಲಿರುವ 100 ಮೆಗಾವ್ಯಾಟ್ ಸೌರಶಕ್ತಿ ಯೋಜನೆಯಾಗಿದೆ. ಇದು ಏಷ್ಯಾದ ಅತಿದೊಡ್ಡ ತೇಲುವ ಸೌರಶಕ್ತಿ ಯೋಜನೆಯಾಗಿದೆ. ಈ ಯೋಜನೆಯನ್ನು ಜುಲೈ 2022 ರಲ್ಲಿ ಕಾರ್ಯಾರಂಭ ಮಾಡಲಾಯಿತು ಮತ್ತು ಇದು ಜಲಾಶಯದ 500 ಎಕರೆ ಪ್ರದೇಶದಲ್ಲಿ ಹರಡಿದೆ.
  • ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಓಂಕಾರೇಶ್ವರ ಜಲಾಶಯದ ಹಿನ್ನೀರಿನಲ್ಲಿ ತೇಲುವ ಸೌರ ಘಟಕವಿದೆ.
  • ಕೇರಳದ ವಯನಾಡಿನ ಬಾಣಾಸು‌ರ್ ಸಾಗರ ಜಲಾಶಯದಲ್ಲಿ