ಭಾರತದ ಕರಾವಳಿ ಉದ್ದ
ಭಾರತದ ಕರಾವಳಿ ಉದ್ದ
ಸುದ್ದಿಯಲ್ಲಿ ಏಕಿದೆ? 1970ರ ದಶಕದಿಂದ 7,516.60 ಕಿಲೋಮೀಟರ್ ಎಂದು ನಂಬಿದ್ದ ಭಾರತದ ಅಧಿಕೃತ ಕರಾವಳಿಯ ಉದ್ದವನ್ನು ಈಗ ಮರು ಲೆಕ್ಕಾಚಾರ ಮಾಡಲಾಗಿದ್ದು, ಅದು ಏರಿಕೆಯಾಗಿ 11,098.81 ಕಿಲೋಮೀಟರ್ಗಳಿಗೆ ಏರಿದೆ ಎಂದು ಭಾರತೀಯ ಸಮೀಕ್ಷಾ ಸಂಸ್ಥೆ (ಸರ್ವೇ ಆಫ್ ಇಂಡಿಯಾ) ಘೋಷಿಸಿದೆ.
ಮುಖ್ಯಾಂಶಗಳು
- ಈ ಹೆಚ್ಚಳವು ದೇಶದ ಭೂಭಾಗದಲ್ಲಿ ಭೌತಿಕ ಬದಲಾವಣೆಯಿಂದ ಆಗಿಲ್ಲ; ಬದಲಿಗೆ ಆಧುನಿಕ ಅಳತೆ ವಿಧಾನಗಳು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಬಳಸಿದ್ದರಿಂದ ಆಗಿದೆ. ಕರಾವಳಿಯ ಸೂಕ್ಷ್ಮ ವಿವರಗಳನ್ನು ಈಗ ಹಿಂದೆಂದಿಗಿಂತಲೂ ಹೆಚ್ಚು ನಿಖರವಾಗಿ ಅಳೆಯಲಾಗಿದೆ.
- ಈ ಮಹತ್ವದ ಕಾರ್ಯದಲ್ಲಿ ಭಾರತೀಯ ಸಮೀಕ್ಷಾ ಸಂಸ್ಥೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಮತ್ತು ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ (ನ್ಯಾಷನಲ್ ಹೈಡೋಗ್ರಾಫಿಕ್ ಆರ್ಗನೈಸೇಷನ್) ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳು ಸಹಕರಿಸಿವೆ.
- ಇನ್ನು ಮುಂದೆ, ಭಾರತದ ಕರಾವಳಿ ಉದ್ದವನ್ನು ಪ್ರತಿ 10 ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುವುದು.
ಹೊಸ ಅಳತೆಗೆ ಕಾರಣಗಳು
ಈಗ ಕರಾವಳಿ ರೇಖೆಯನ್ನು ‘ಉಬ್ಬರವಿಳಿತದ ರೇಖೆ’ (ಹೈ-ವಾಟರ್ ಲೈನ್) ಆಧಾರದ ಮೇಲೆ ಅಳೆಯಲಾಗಿದೆ. ಇದಕ್ಕಾಗಿ 2011ರ ಎಲೆಕ್ಟ್ರಾನಿಕ್ ನ್ಯಾವಿಗೇಷನ್ ಚಾರ್ಟ್ಗಳನ್ನು (ENCs) ಬಳಸಲಾಗಿದೆ. ಹಿಂದೆ 1:4,500,000 ಅಥವಾ ಅದಕ್ಕಿಂತ ಚಿಕ್ಕ ಪ್ರಮಾಣದ ನಕ್ಷೆಗಳನ್ನು ಬಳಸಲಾಗುತ್ತಿತ್ತು. ಈಗ 1:250,000 ಎಂಬ ದೊಡ್ಡ ಪ್ರಮಾಣದ ನಕ್ಷೆಗಳನ್ನು ಬಳಸಲಾಗಿದೆ. ಈ ದೊಡ್ಡ ಪ್ರಮಾಣದ ನಕ್ಷೆಗಳು ಹಿಂದೆ ಕೈಬಿಟ್ಟಿದ್ದ ಅನೇಕ ಸಣ್ಣ ವಿವರಗಳನ್ನೂ ಸೆರೆಹಿಡಿಯಲು ಸಹಾಯ ಮಾಡಿವೆ.
ಆಧುನಿಕ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಸಾಫ್ಟ್ವೇರ್, ಲಿಡಾರ್-ಜಿ.ಪಿ.ಎಸ್. (LIDAR-GPS) ಬಳಸಿ ನಕ್ಷೆ ತಯಾರಿಸಿರುವುದಕ್ಕೆ ಹಲವೆಡೆ ಪ್ರೋನ್ ಇಮೇಜಿಂಗ್ ಮತ್ತು ಉಪಗ್ರಹದ ಬಳಕೆಯೊಂದಿಗೆ ಅಳತೆ (ಸ್ಯಾಟಲೈಟ್ ಅಲ್ಟಿಮಿಟ್ರಿ) ತಂತ್ರಜ್ಞಾನಗಳನ್ನು ಬಳಸಿದೆ.
ದ್ವೀಪಗಳ ಸೇರ್ಪಡೆ: ಈ ಹೊಸ ಅಳತೆಯಲ್ಲಿ 1,298 ಕಡಲಾಚೆಯ ದ್ವೀಪಗಳು ಮತ್ತು ಸಣ್ಣ ದ್ವೀಪಗಳ (1,059 ದ್ವೀಪಗಳು ಮತ್ತು 239 ಸಣ್ಣ ದ್ವೀಪಗಳು) ಕರಾವಳಿ ಉದ್ದವನ್ನೂ ಸೇರಿಸಲಾಗಿದೆ.
ಈ ನವೀಕರಿಸಿದ ಕರಾವಳಿ ಉದ್ದವು ದೇಶದ ಹಲವು ಪ್ರಮುಖ ವಿಷಯಗಳ ಮೇಲೆ ಪರಿಣಾಮ ಬೀರಲಿದೆ.
ಇದು ಕಡಲ ಭದ್ರತೆ, ಆರ್ಥಿಕ ವಲಯ ವಿಭಜನೆ, ಕರಾವಳಿ ನಿಯಂತ್ರಣ ಮತ್ತು ನಿರ್ವಹಣೆ, ಪರಿಸರ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಯೋಜನೆಗಳಿಗೆ ಬಹಳ ಮುಖ್ಯವಾಗಿದೆ.