Published on: June 6, 2025

ರಫೇಲ್ ಯುದ್ಧ ವಿಮಾನ

ರಫೇಲ್ ಯುದ್ಧ ವಿಮಾನ

ಸುದ್ದಿಯಲ್ಲಿ ಏಕಿದೆ? ಫ್ರಾನ್ಸನ ಡಸಾಲ್ಟ್ ಏವಿಯೇಷನ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ರಫೇಲ್ ಯುದ್ಧ ವಿಮಾನದ ಫ್ಯೂಸ್‌ಲೇಜ್‌(ಬಾಡಿ ಚೌಕಟ್ಟು)ಗಳನ್ನು ಭಾರತದಲ್ಲಿ ಉತ್ಪಾದಿಸಲು ನಾಲ್ಕು ಉತ್ಪಾದನಾ ವರ್ಗಾವಣೆ ಒಪ್ಪಂದಗಳಿಗೆ ಸಹಿ ಹಾಕಿವೆ.

ಮುಖ್ಯಾಂಶಗಳು

  • ಫ್ರೆಂಚ್ ವಿಮಾನ ತಯಾರಕ ಡಸಾಲ್ಟ್ ಏವಿಯೇಷನ್, ಟಾಟಾ ಗ್ರೂಪ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ರಫೇಲ್ ಯುದ್ಧ ವಿಮಾನಗಳ ಫ್ಯೂಸ್‌ಲೇಜ್‌ಗಳನ್ನು ಭಾರತದಲ್ಲಿ ಉತ್ಪಾದಿಸಲು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್‌) ಜೊತೆ ಒಪ್ಪಂದ ಮಾಡಿಕೊಂಡಿದೆ.

§  ಇದಕ್ಕಾಗಿ ಹೈದರಾಬಾದ್‌ನಲ್ಲಿ ಉತ್ಪಾದನಾ ಘಟಕ ಸ್ಥಾಪನೆಯಾಗಲಿದ್ದು, 2028ರಲ್ಲಿ ಮೊದಲ ಭಾಗಗಳು ಹೊರಬರುವ ನಿರೀಕ್ಷೆಯಿದೆ.

  • ಈ ಸಹಭಾಗಿತ್ವವು ಭಾರತದ ಏರೋಸ್ಪೇಸ್ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವ ಮತ್ತು ಜಾಗತಿಕ ಪೂರೈಕೆ ಸರಪಳಿಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
  • ವಿಮಾನದ ಮುಂಭಾಗ, ಮದ್ಯದ ಭಾಗ, ಹಿಂಭಾಗ, ಫ್ಯೂಸ್‌ಲೇಜ್‌ಗೆ ತಾಕಿಕೊಂಡಿರುವ ಶೆಲ್‌ಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ
  • ಡಸಾಲ್ಟ್‌ ಫ್ರಾನ್ಸ್‌ನ ಹೊರಗೆ ಮೊದಲ ಬಾರಿಗೆ ವಿಮಾನದ ಬಾಡಿಗಳನ್ನು ಉತ್ಪಾದನೆ ಮಾಡುತ್ತಿದೆ. ಇದು ಪೂರೈಕೆ ಸರಪಳಿಯನ್ನು ಬಲಪಡಿಸಲಿದೆ.

ಫ್ಯೂಸ್‌ಲೇಜ್‌

ಪೈಲಟ್, ಪ್ರಯಾಣಿಕರು ಮತ್ತು ಸರಕುಗಳನ್ನು ಹೊತ್ತೊಯ್ಯುವ ಮಹತ್ವದ ಭಾಗವನ್ನು ಫ್ಯೂಸ್ ಲೇಜ್ ಎಂದು ಕರೆಯಲಾಗುತ್ತದೆ.

ರಫೇಲ್

  • ರಫೇಲ್ ಫ್ರೆಂಚ್ ಅವಳಿ-ಎಂಜಿನ್, ಬಹುಪಾತ್ರದ ಯುದ್ಧ ವಿಮಾನವಾಗಿದ್ದು, ಇದನ್ನು 4.5 ತಲೆಮಾರಿನ ವಿಮಾನವೆಂದು ಪರಿಗಣಿಸಲಾಗಿದೆ, ಇದು ವಾಯು ರಕ್ಷಣೆ, ವಾಯು ಬೆಂಬಲ, ಆಳವಾದ ದಾಳಿಗಳು ಮತ್ತು ಪರಮಾಣು ತಡೆಗಟ್ಟುವಿಕೆ ಸೇರಿದಂತೆ ಆಕಾಶದಿಂದ ಆಕಾಶಕ್ಕೆ , ಆಕಾಶದಿಂದ ಭೂಮಿಗೆ ಹಾರುವ ಸಾಮರ್ಥ್ಯವನ್ನು ಹೊಂದಿದೆ.
  • ಭಾರತೀಯ ವಾಯುಪಡೆಯು ಈಗಾಗಲೇ 36 ರಫೇಲ್ ವಿಮಾನಗಳನ್ನು ನಿರ್ವಹಿಸುತ್ತಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ 63,000 ಕೋಟಿ ರೂ. ಮೌಲ್ಯದ ಒಪ್ಪಂದದ ಭಾಗವಾಗಿ ಭಾರತೀಯ ನೌಕಾಪಡೆಯು 2030 ರ ವೇಳೆಗೆ 26 ರಫೇಲ್ ಮೆರೈನ್ ಜೆಟ್‌ಗಳನ್ನು ಸೇರ್ಪಡೆಗೊಳಿಸಲಿದೆ
  • ಭಾರತೀಯ ವಾಯುಪಡೆಯ ಏರ್ ವೈಸ್ ಚೀಫ್ ಮಾರ್ಷಲ್ ಹಿಲಾಲ್ ಅಹ್ಮದ್ ರಫೇಲ್ ಯುದ್ಧ ವಿಮಾನ ಹಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.