ಮೆನಾರ್ ಮತ್ತು ಖಿಚನ್ ರಾಮ್ಸರ್ ತಾಣಗಳು
ಮೆನಾರ್ ಮತ್ತು ಖಿಚನ್ ರಾಮ್ಸರ್ ತಾಣಗಳು
ಸುದ್ದಿಯಲ್ಲಿ ಏಕಿದೆ? ವಿಶ್ವ ಪರಿಸರ ದಿನಾಚರಣೆಗೂ ಮುನ್ನ ಭಾರತವು ಎರಡು ಹೊಸ ರಾಮ್ಸರ್ ತಾಣಗಳನ್ನು ಸೇರಿಸಿದೆ, ಮೆನಾರ್ (ಉದಯಪುರ) ಮತ್ತು ಖಿಚನ್ (ಫಲೋಡಿ) ಈ ಎರಡು ತಾಣಗಳು ರಾಜಸ್ಥಾನದಲ್ಲಿವೆ.
ಮುಖ್ಯಾಂಶಗಳು
- ಇದರೊಂದಿಗೆ, ಭಾರತದ ಒಟ್ಟು ರಾಮ್ಸರ್ ಜೌಗು ಪ್ರದೇಶಗಳ ಸಂಖ್ಯೆ 91 ಕ್ಕೆ ಏರಿದೆ, ಇದು ಭಾರತವನ್ನು ಏಷ್ಯಾದಲ್ಲಿ ಅತಿ ಹೆಚ್ಚು ಮತ್ತು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿರಿಸಿದೆ
ಮೆನಾರ್ ಜೌಗು ಪ್ರದೇಶ, ಉದಯಪುರ:
ಸಾಮಾನ್ಯವಾಗಿ ಪಕ್ಷಿ ಗ್ರಾಮ ಎಂದು ಕರೆಯಲಾಗುತ್ತದೆ
ಗಾತ್ರ: 104 ಹೆಕ್ಟೇರ್
ಜೀವವೈವಿಧ್ಯ: ಯುರೇಷಿಯನ್ ಕೂಟ್(ನಾಮದ ಕೋಳಿ), ಹೆರಾನ್(ಕಬ್ಬಾರೆ ಹಕ್ಕಿ), ಸ್ಪಾಟ್-ಬಿಲ್ಡ್ ಬಾತುಕೋಳಿ(ವರಟೆ, ಚುಕ್ಕಿಬಾತು) ಸೇರಿದಂತೆ 200 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಹೊಂದಿದೆ.
ಸಮುದಾಯ ಆಧಾರಿತ ಸಂರಕ್ಷಣೆ: ಸ್ಥಳೀಯ ನಿವಾಸಿಗಳಿಗೆ ಬೇಟೆ/ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ; 2016 ರಲ್ಲಿ ಪ್ರಮುಖ ಪಕ್ಷಿ ಪ್ರದೇಶ (IBA)ಎಂದು ಘೋಷಿಸಲಾಯಿತು.
ಪ್ರವಾಸೋದ್ಯಮ ಮೌಲ್ಯ: ಉದಯಪುರ-ಚಿತ್ತೋರ್ಗಢ ಮಾರ್ಗದಲ್ಲಿ ಬೆಳೆಯುತ್ತಿರುವ ಪರಿಸರ ಪ್ರವಾಸೋದ್ಯಮ ತಾಣವಾಗಿದೆ.
ಖಿಚಾನ್ ಜೌಗು ಪ್ರದೇಶ, ಫಲೋಡಿ:
ವಲಸೆ ಡೆಮೊಯಿಸೆಲ್ ಕ್ರೇನ್(ಕೊಕ್ಕರೆ) ಗಳಿಗೆ ಪ್ರಸಿದ್ಧವಾಗಿದೆ
ಪರಿಸರ ಮಹತ್ವ: ವಲಸೆ ಹಕ್ಕಿಗಳ ದೊಡ್ಡ ಹಿಂಡುಗಳಿಗೆ ಚಳಿಗಾಲದ ತಾಣವಾಗಿದೆ
ಸಮುದಾಯ ಪಾತ್ರ: ಸ್ಥಳೀಯ ಸಂಪ್ರದಾಯಗಳು ಪಕ್ಷಿಗಳನ್ನು ರಕ್ಷಿಸುತ್ತವೆ; ಮಧ್ಯ ಏಷ್ಯಾದ ಹಾರಾಟ ಮಾರ್ಗದ ಉದ್ದಕ್ಕೂ ನಿರ್ಣಾಯಕ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತದೆ.
ರಾಮ್ಸರ್ ತಾಣಗಳ ಬಗ್ಗೆ:
- ಇದು ಜೌಗು ಪ್ರದೇಶಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಗಾಗಿ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.
- ಇದನ್ನು ಫೆಬ್ರವರಿ 2, 1971 ರಂದು ಇರಾನ್ನ ರಾಮ್ಸರ್ ನಗರದಲ್ಲಿ ಸ್ಥಾಪಿಸಲಾಯಿತು..
- ನಿರ್ಣಾಯಕ ಪರಿಸರ ವ್ಯವಸ್ಥೆಯ ಸೇವೆಗಳನ್ನು ಒದಗಿಸುವ, ಜೀವವೈವಿಧ್ಯತೆಯನ್ನು ಬೆಂಬಲಿಸುವ ಮತ್ತು ಸ್ಥಳೀಯ ಜೀವನೋಪಾಯವನ್ನು ಉಳಿಸಿಕೊಳ್ಳುವ ಜೌಗು ಪ್ರದೇಶಗಳನ್ನು ಗುರುತಿಸುತ್ತದೆ.
ರಾಮ್ಸರ್ ತಾಣಗಳಲ್ಲಿ ಭಾರತದ ಸ್ಥಿತಿ:
- ಭಾರತವು ರಾಮ್ಸರ್ ಸಮಾವೇಶಕ್ಕೆ ಫೆಬ್ರವರಿ 1, 1982 ರಲ್ಲಿ ಸಹಿ ಹಾಕಿತು:
- ಮೊದಲ ರಾಮ್ಸರ್ ತಾಣಗಳು: ಚಿಲಿಕಾ ಸರೋವರ (ಒಡಿಶಾ) ಮತ್ತು ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ (ರಾಜಸ್ಥಾನ) 1981 ರಲ್ಲಿ
- ಒಟ್ಟು ರಾಮ್ಸರ್ ತಾಣಗಳು (ಜೂನ್ 2025 ರ ಹೊತ್ತಿಗೆ): 91
- ವ್ಯಾಪ್ತಿ ಪ್ರದೇಶ: ~13.59 ಲಕ್ಷ ಹೆಕ್ಟೇರ್
- ಭಾರತದ ಜಾಗತಿಕ ಶ್ರೇಯಾಂಕ:
- ಏಷ್ಯಾದಲ್ಲಿ 1 ನೇ ಸ್ಥಾನ,
- ಜಾಗತಿಕವಾಗಿ 3 ನೇ ಸ್ಥಾನ (ಯುಕೆ ನಂತರ – 175 ಮತ್ತು ಮೆಕ್ಸಿಕೊ – 142)
ತಮಿಳುನಾಡು – 20
ಉತ್ತರ ಪ್ರದೇಶ – 10
ಕರ್ನಾಟಕ- 4
ರಾಜಸ್ಥಾನ – 4 (ನಂತರ ಮೆನಾರ್ ಮತ್ತು ಖಿಚಾನ್ ಸೇರ್ಪಡೆ)
ನಿಮಗಿದು ತಿಳಿದಿರಲಿ
- ಪ್ರಸ್ತುತ 171 ದೇಶಗಳು ರಾಮ್ಸರ್ ಸಮಾವೇಶದ ಭಾಗವಾಗಿವೆ.
- ಬೊಲಿವಿಯಾವು 148,000 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ ಅತಿದೊಡ್ಡ ಜೌಗು ಪ್ರದೇಶವನ್ನು ರಕ್ಷಣೆಯಲ್ಲಿದೆ.
- ರಾಮ್ಸರ್ ಸಮಾವೇಶಕ್ಕೆ ಸಹಿ ಹಾಕಿದ ನೆನಪಿಗಾಗಿ ಮತ್ತು ಜೌಗು ಪ್ರದೇಶಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆಬ್ರವರಿ 2 ರಂದು ವಿಶ್ವ ಜೌಗು ಪ್ರದೇಶ ದಿನವನ್ನು ಆಚರಿಸಲಾಗುತ್ತದೆ.
- ಮಾಂಟ್ರಿಯಕ್ಸ್ ದಾಖಲೆಯು ಮಾನವ ಪ್ರೇರಿತ ಬೆದರಿಕೆಗಳಿಂದಾಗಿ ತುರ್ತು ಸಂರಕ್ಷಣಾ ಗಮನ ಅಗತ್ಯವಿರುವ ರಾಮ್ಸರ್ ತಾಣಗಳ ಪಟ್ಟಿಯಾಗಿದೆ.