Published on: June 14, 2025
ಕೃಷಿ ವಿವಿ ಮತ್ತು ತೋಟಗಾರಿಕೆ ವಿವಿಯೊಂದಿಗೆ ಪಶು ವಿವಿಯನ್ನು ವಿಲೀನ
ಕೃಷಿ ವಿವಿ ಮತ್ತು ತೋಟಗಾರಿಕೆ ವಿವಿಯೊಂದಿಗೆ ಪಶು ವಿವಿಯನ್ನು ವಿಲೀನ
ಸುದ್ದಿಯಲ್ಲಿ ಏಕಿದೆ? ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ರಾಜ್ಯದ ಇತರೆ ವಿಶ್ವವಿದ್ಯಾಲಯಗಳೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮುಖ್ಯಾಂಶಗಳು
- ರಾಯಚೂರಿನ ಕೃಷಿ ವಿವಿ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿವಿಯೊಂದಿಗೆ ಪಶು ವಿವಿಯನ್ನು ವಿಲೀನಗೊಳಿಸಲು ಉದ್ದೇಶಿಸಲಾಗಿದೆ.
- ವಿಲೀನ ಪ್ರಕ್ರಿಯೆಗಾಗಿ ರಾಜ್ಯ ಸರ್ಕಾರವು ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಸಮಿತಿ ರಚಿಸಿದೆ.
ಪಶು ವೈದ್ಯಕೀಯ ವಿಶ್ವವಿದ್ಯಾಲಯ :
- ಪ್ರಾದೇಶಿಕ ಅಸಮತೋಲನ ನಿವಾರಣೆಯ ಹಿನ್ನೆಲೆಯಲ್ಲಿ ಡಾ. ನಂಜುಂಡಪ್ಪ ವರದಿ ಆಧರಿಸಿ ಬೀದರ್ನಲ್ಲಿ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ.
- 2005ರಲ್ಲಿ ವಿವಿ ಕಾರ್ಯಾರಂಭ ಮಾಡಿತು.
- ವಿವಿ ಶ್ರಮದಿಂದ ಮುಧೋಳ ತಳಿಯ ನಾಯಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ.
- ಮುಧೋಳನಲ್ಲಿ ಶ್ವಾನ ಸಂಶೋಧನಾ ಸಂಸ್ಥೆ ಸಹ ಆರಂಭಿಸಲಾಗಿದೆ.
- ವಿಜಯಪುರದಲ್ಲಿ ಮೀನುಗಾರಿಕೆ ಸಂಸ್ಥೆ ಆರಂಭಿಸಲಾಗಿದ್ದು ಇದರಿಂದ ಉತ್ತರದಲ್ಲಿ ಮೀನುಗಾರಿಕೆ ಚಟುವಟಿಕೆಗಳಿಗೆ ಉತ್ತೇಜನ ಸಿಕ್ಕಿದೆ.