Published on: May 20, 2025
ಚಂದ್ರಯಾನ-5/ಲುಪೆಕ್ಸ್ ಮಿಷನ್
ಚಂದ್ರಯಾನ-5/ಲುಪೆಕ್ಸ್ ಮಿಷನ್
ಸುದ್ದಿಯಲ್ಲಿ ಏಕಿದೆ? ವೈಜ್ಞಾನಿಕ ಅಧ್ಯಯನ ನಡೆಸುವ ಉದ್ದೇಶದ ಭಾರತ- ಜಪಾನ್ ಜಂಟಿ ಸಹಭಾಗಿತ್ವದ ‘ಚಂದ್ರಯಾನ-5’ ರ ಕುರಿತು ಉಭಯ ದೇಶಗಳ ವಿಜ್ಞಾನಿಗಳ ಉನ್ನತಮಟ್ಟದ ಮೂರನೇ ತಾಂತ್ರಿಕ ಸಭೆ ಬೆಂಗಳೂರಿನಲ್ಲಿ ನಡೆಯಿತು.
ಮುಖ್ಯಾಂಶಗಳು
- ತಾಂತ್ರಿಕ ಸಭೆಯಲ್ಲಿ ಇಸ್ರೋ ಮತ್ತು ಜಪಾನಿನ ಜಾಕ್ಸಾ ಹಾಗೂ ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ನ (ಎಂಎಚ್ಐ) ಹಿರಿಯ ಅಧಿಕಾರಿಗಳು ಚಂದ್ರನ ಮೇಲೆ ಹೊತ್ತೊಯ್ಯುವ ಉಪಕರಣಗಳು ಮತ್ತು ಅದಕ್ಕೆ ಅಗತ್ಯವಿರುವ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ ಕುರಿತು ತಾಂತ್ರಿಕ ವಿಚಾರಗಳನ್ನು ವಿವರವಾಗಿ ಚರ್ಚಿಸಿದರು.
- ಈ ಯಾನಕ್ಕೆ ಚಂದ್ರಯಾನ-5/ಲುಪೆಕ್ಸ್ ಮಿಷನ್ ಎಂಬ ಹೆಸರನ್ನು ಇಡಲಾಗಿದೆ.
- ಈ ಯೋಜನೆಗೆ ಅಗತ್ಯವಿರುವ ಹಣವನ್ನು ನೀಡಲು ಕೇಂದ್ರ ಸರ್ಕಾರ ಮಾರ್ಚ್ನಲ್ಲಿ ಒಪ್ಪಿಗೆ ನೀಡಿದೆ.
ಚಂದ್ರಯಾನ-3
2023 ರಲ್ಲಿ ಚಂದ್ರಯಾನ-3 ಭಾರತವನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಮೃದುವಾಗಿ ಇಳಿಸಿದ ಮೊದಲ ದೇಶವನ್ನಾಗಿ ಮಾಡಿತು.
ಚಂದ್ರಯಾನ-4
ಚಂದ್ರಯಾನ-4 ರ ಮೂಲಕ ಚಂದ್ರನ ಅಂಗಳದ ಕಲ್ಲು, ಮಣ್ಣು ಮತ್ತು ಖನಿಜಗಳ ಮಾದರಿಗಳನ್ನು ಅಧ್ಯಯನಕ್ಕಾಗಿ ಹೊತ್ತು ತರಲಿದೆ. ಇದನ್ನು ಚಂದ್ರಯಾನ-5 ಕ್ಕೂ ಮೊದಲು ನಿಗದಿಪಡಿಸಲಾಗಿದೆ.
ಚಂದ್ರಯಾನ-5
- ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಯಂ ನೆರಳಿನ ಭಾಗದಲ್ಲಿರುವ ನೀರು ಸೇರಿದಂತೆ ಆವಿ ಸ್ಥಿತಿಯಲ್ಲಿರುವ ವಸ್ತುಗಳ ಅಧ್ಯಯನ ನಡೆಸಲಾಗುವುದು.
- ಚಂದ್ರಯಾನ-5 ಅನ್ನು LUPEX (ಚಂದ್ರ ಧ್ರುವ ಪರಿಶೋಧನೆ) ಎಂದೂ ಕರೆಯುತ್ತಾರೆ, ಇದು ಇಸ್ರೋ (ಭಾರತ) ಮತ್ತು JAXA (ಜಪಾನ್ನ ಬಾಹ್ಯಾಕಾಶ ಸಂಸ್ಥೆ) ಜಂಟಿ ಚಂದ್ರನ ಕಾರ್ಯಾಚರಣೆಯಾಗಿದ್ದು, ಜಪಾನ್ನ H3 ರಾಕೆಟ್ನಲ್ಲಿ 2027-28 ರಲ್ಲಿ ಉಡಾವಣೆಗೊಳ್ಳಲಿದೆ.
- ಇಸ್ರೋ ನಿರ್ಮಿತ ಲ್ಯಾಂಡರ್ ಮತ್ತು ಜಪಾನ್ನ ಮಿತ್ಸುಬಿಷಿ ನಿರ್ಮಿತ ರೋವರ್ ಪಯಣ ಬೆಳೆಸಲಿವೆ.
- ಇದು ESA ಯ ಮಾಸ್ ಸ್ಪೆಕ್ಟ್ರೋಮೀಟರ್ ಮತ್ತು NASA ಯ ನ್ಯೂಟ್ರಾನ್ ಸ್ಪೆಕ್ಟ್ರೋಮೀಟರ್ಗಳು ಸೇರಿದಂತೆ 7 ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ಯಲಿದೆ.
- ಮಿಷನ್ ಉದ್ದೇಶಗಳು:
- ಚಂದ್ರನ ನೀರಿನ ಉಪಸ್ಥಿತಿಯನ್ನು ನಕ್ಷೆ ಮಾಡುವುದು.
- ನೀರಿನ ಅಂಶ, ಗುಣಮಟ್ಟ ಮತ್ತು ಸಂಯೋಜನೆಯನ್ನು ವಿಶ್ಲೇಷಿಸಲು ಚಂದ್ರನ ಮೇಲ್ಮೈ ಅನ್ನು ಕೊರೆಯುವುದು.
- ಸ್ಪೆಕ್ಟ್ರೋಮೀಟರ್ಗಳು ಮತ್ತು ಸಂವೇದಕಗಳನ್ನು ಬಳಸಿಕೊಂಡು ಸ್ಥಳದಲ್ಲೇ ವೈಜ್ಞಾನಿಕ ಅವಲೋಕನಗಳನ್ನು ನಡೆಸುವುದು.
ಭವಿಷ್ಯದ ಎರಡು ಪ್ರಮುಖ ಯೋಜನೆಗಳು
- 2035ರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತವು ಪೂರ್ಣ ಪ್ರಮಾಣದ ನಿಲ್ದಾಣವನ್ನು ಸ್ಥಾಪಿಸಲಿದೆ
- 2047ರಲ್ಲಿ ಭಾರತ ಸ್ವಾತಂತ್ರ್ಯ ಪಡೆದು 100 ವರ್ಷ ತುಂಬುವ ಕಾರಣ ಚಂದ್ರನ ಮೇಲೆ ನೆಲೆಯೊಂದನ್ನು ಸ್ಥಾಪಿಸಲು ಇಸ್ರೋ ಯೋಜನೆ ರೂಪಿಸಿದೆ