ಚೆನಾಬ್ ರೈಲು ಸೇತುವೆ
ಚೆನಾಬ್ ರೈಲು ಸೇತುವೆ
ಸುದ್ದಿಯಲ್ಲಿ ಏಕಿದೆ? ಪ್ರಧಾನಮಂತ್ರಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಚೆನಾಬ್ ರೈಲು ಸೇತುವೆ ಮತ್ತು ಚೆನಾಬ್ ನದಿಯ ಉಪನದಿಯಾದ ಅಂಜಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಭಾರತದ ಮೊದಲ ಕೇಬಲ್-ಸ್ಟೇ ರೈಲು ಸೇತುವೆಯಾದ ಅಂಜಿ ಖಾಡ್ ಸೇತುವೆಯನ್ನು ಉದ್ಘಾಟಿಸಿದರು.
ಮಹತ್ವ
- ಎರಡೂ ಸೇತುವೆಗಳು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆಯ ಭಾಗವಾಗಿದ್ದು, ಕಾಶ್ಮೀರ ಮತ್ತು ಭಾರತದ ಉಳಿದ ಭಾಗಗಳ ನಡುವೆ ಎಲ್ಲಾ ಹವಾಮಾನ ರೈಲು ಸಂಪರ್ಕವನ್ನು ಒದಗಿಸುತ್ತದೆ.
- ಈ ಎರಡು ಸೇತುವೆಯನ್ನು ಕೊಂಕಣ ರೈಲ್ವೆ ನಿಗಮದಿಂದ ಕಾರ್ಯಗತಗೊಳಿಸಲಾಗಿದೆ..
ಚೆನಾಬ್ ರೈಲು ಸೇತುವೆಯ ಬಗ್ಗೆ:
- ರಿಯಾಸಿ ಜಿಲ್ಲೆಯಲ್ಲಿ ನೆಲೆಗೊಂಡಿರುವ ಇದು ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾಗಿದೆ.
- 2008ರಲ್ಲಿ ಯೋಜನೆಯ ಕಾಮಗಾರಿ ಆರಂಭವಾಗಿತ್ತು.
- ನಿರ್ಮಾಣ ಮತ್ತು ವಿನ್ಯಾಸ: ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್, ಅಲ್ಟ್ರಾ ಕನ್‌ಸ್ಟ್ರಕ್ಷನ್ (ದಕ್ಷಿಣ ಕೊರಿಯಾ) ಮತ್ತು ವಿಎಸ್‌ಎಲ್ ಇಂಡಿಯಾದ ಜಂಟಿ ಉದ್ಯಮದಿಂದ ನಿರ್ಮಿಸಲಾಗಿದೆ, ಅಡಿಪಾಯವನ್ನು ಬೆಂಗಳೂರಿನ ಐಐಎಸ್ಸಿ ವಿನ್ಯಾಸಗೊಳಿಸಿದೆ. ಐಐಟಿ ದೆಹಲಿ ಮತ್ತು ಐಐಟಿ ರೂರ್ಕಿ ಭೂಕಂಪನ ವಿಶ್ಲೇಷಣೆ ನಡೆಸಿದರೆ, ಡಿಆರ್‌ಡಿಒ ಸೇತುವೆ ಸ್ಫೋಟ ನಿರೋಧಕವಾಗಿದೆ ಎಂದು ಖಚಿತಪಡಿಸಿಕೊಂಡಿದೆ.
- ಈ ಬ್ರಿಡ್ಜ್ ನಿರ್ಮಾಣದ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕಿ ಜಿ. ಮಾಧವಿ ಲತಾ ಅವರ ಕೊಡುಗೆ ಇದೆ.
- 17 ವರ್ಷಗಳ ಕಾಲ ಚೆನಾಬ್ ಸೇತುವೆ ಯೋಜನೆಯಲ್ಲಿ ಭೂತಾಂತ್ರಿಕ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.
- ಐಐಎಸ್ಸಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ರಾಕ್ ಎಂಜಿನಿಯರಿಂಗ್ ತಜ್ಞೆಯಾಗಿದ್ದಾರೆ
- ಬಾಳಿಕೆ ಮತ್ತು ಸುರಕ್ಷತೆ: ಇದನ್ನು 8 ತೀವ್ರತೆಯ ಭೂಕಂಪಗಳು, 40 ಟನ್ TNT ವರೆಗಿನ ಸ್ಫೋಟಗಳು, -20°C ವರೆಗಿನ ಕಡಿಮೆ ತಾಪಮಾನ ಮತ್ತು 266 ಕಿಮೀ/ಗಂಟೆಗೆ ತಲುಪುವ ಗಾಳಿಯ ವೇಗವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.
ಅಂಜಿ ಖಾಡ್ ಸೇತುವೆ
ನಿರ್ಮಾಣ: 2017 ರಲ್ಲಿ ಪ್ರಾರಂಭವಾಗಿ 2023 ರಲ್ಲಿ ಪೂರ್ಣಗೊಂಡಿತು.
ಉದ್ದ: 725.5 ಮೀಟರ್.
ಎತ್ತರ: 331 ಮೀಟರ್ (ನದಿಯ ತಳದಿಂದ).
ನಿರ್ಮಾಪಕ: ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ.
ಸಂಪರ್ಕಿಸುವ ಸ್ಥಳಗಳು: ಕತ್ರಾ ಮತ್ತು ರಿಯಾಸಿ ನಡುವಿನ ಪ್ರದೇಶವನ್ನು ಸಂಪರ್ಕಿಸುತ್ತದೆ
ಇದು ಭಾರತದ ಮೊದಲ ಕೇಬಲ್-ಸ್ಟೇಡ್ ರೈಲು ಸೇತುವೆ ಮತ್ತು ಚೆನಾಬ್ ರೈಲು ಸೇತುವೆಯ ನಂತರ ದೇಶದ 2 ನೇ ಅತಿ ಎತ್ತರದ ರೈಲ್ವೆ ಸೇತುವೆಯಾಗಿದೆ.
ಚೆನಾಬ್ (ಅಥವಾ ಚಂದ್ರಭಾಗಾ ನದಿ)
ಸಿಂಧೂ ನದಿಯ ಅತಿದೊಡ್ಡ ಉಪನದಿಯಾಗಿದ್ದು, ಹಿಮಾಚಲ ಪ್ರದೇಶದ ತಂಡಿಯಲ್ಲಿ ಚಂದ್ರ ಮತ್ತು ಭಾಗಾ ನದಿಗಳ ಸಂಗಮದಿಂದ ರೂಪುಗೊಂಡಿದೆ.